ಲೇಖಕರು ನಾಡಿನ ಪ್ರಖ್ಯಾತ ಪ್ರಗತಿಪರ ಮತ್ತು ತನಿಖಾ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು. ಸಂಶೋಧನೆ, ಸಾಹಿತ್ಯ ಮತ್ತು ಜನಪರ ಹೋರಾಟಗಳು ಇವರ ಆಸಕ್ತಿ. ‘ನೇತ್ರಾವತಿಯಲ್ಲಿ ನೆತ್ತರು’, ‘ಕುತ್ಲೂರು ಕಥನ’, ‘ನಡುಬಗ್ಗಿಸದ ಎದೆಯ ದನಿ’, ‘ಕರಾವಳಿ ಚರಿತ್ರೆಯಲ್ಲಿ ಹೈದರಾಲಿ ಮತ್ತು ಟಿಪ್ಪೂ ಸುಲ್ತಾನ್’, ‘ಸದನದಲ್ಲಿ ಕಾಮ್ರೇಡ್ ಸೂರಿ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.