ಪ್ರಧಾನ ಸಂಪಾದಕರು

ಗಿರೀಶ್ ತಾಳಿಕಟ್ಟೆ
ಎರಡು ದಶಕಗಳ ಪತ್ರಿಕೋದ್ಯಮದ ಅನುಭವ | ವಿಶ್ಲೇಷಣಾತ್ಮಕ ದೃಷ್ಟಿಕೋನ | ಸೃಜನಶೀಲ ಸಾಹಿತ್ಯ
ಪತ್ರಿಕೋದ್ಯಮದ ಎರಡು ದಶಕಗಳ ಸುದೀರ್ಘ ಅನುಭವ, ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತ ಆಳವಾದ ಆಸಕ್ತಿ ಹಾಗೂ ಸಾಹಿತ್ಯಿಕ ಅಭಿವ್ಯಕ್ತಿಯ ವಿಶಿಷ್ಟ ಛಾಪು ಇವು ಗಿರೀಶ್ ತಾಳಿಕಟ್ಟೆ ಅವರ ವೃತ್ತಿಪರ ಪಯಣದ ಪ್ರಮುಖ ಆಯಾಮಗಳು. ಪತ್ರಿಕೋದ್ಯಮವನ್ನು ಕೇವಲ ಸುದ್ದಿಗಳ ಪ್ರಸರಣಕ್ಕೆ ಸೀಮಿತಗೊಳಿಸದೆ, ಸಮಾಜದ ಆಗುಹೋಗುಗಳನ್ನು ಅರ್ಥೈಸುವ, ಸಾರ್ವಜನಿಕ ವಿಚಾರಗಳ ಕುರಿತು ಚಿಂತನೆಗೆ ಪ್ರೇರೇಪಿಸುವ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಓದುಗರ ಮುಂದಿಡುವ ಜವಾಬ್ದಾರಿಯುತ ಮಾಧ್ಯಮವಾಗಿ ನೋಡುವುದು ಅವರ ಕಾರ್ಯವೈಖರಿಯ ವೈಶಿಷ್ಟ್ಯ.
ರಾಜಕೀಯ, ಸಾಹಿತ್ಯ, ಶಿಕ್ಷಣ, ಉದ್ಯೋಗ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ವಿಶ್ಲೇಷಣೆಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು, ಪತ್ರಿಕೋದ್ಯಮದ ವಿವಿಧ ಮಜಲುಗಳಲ್ಲಿ ಸಂಪಾದಕೀಯ ಅನುಭವವನ್ನು ಗಳಿಸಿದ್ದಾರೆ. ಉದ್ಯೋಗ ಸ್ಪೂರ್ತಿ, ಜಾಬ್ ನ್ಯೂಸ್ ಮತ್ತು ಉದ್ಯೋಗ ಎಲ್ಲಿ? ಹೇಗೆ? ಪಾಕ್ಷಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿರುವ ಅವರು, ಗೌರಿ ಲಂಕೇಶ್ ಮತ್ತು ನ್ಯಾಯಪಥ ವಾರಪತ್ರಿಕೆಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಸೌಂದರ್ಯ ಮತ್ತು ಆರಕ್ಷಕ ಲಹರಿ ಮಾಸಪತ್ರಿಕೆಗಳ ಸಹ ಸಂಪಾದಕರಾಗಿ ತಮ್ಮ ವೃತ್ತಿಪರ ಕೊಡುಗೆ ನೀಡಿದ್ದಾರೆ.
ಮತ್ತಷ್ಟು ಓದಿ…
ವಿವಿಧ ಪತ್ರಿಕೆಗಳಲ್ಲಿನ ಈ ಅನುಭವವು ಸಂಪಾದಕೀಯ ಕಾರ್ಯನಿರ್ವಹಣೆ, ವಿಷಯಗಳ ಆಯ್ಕೆ, ಬರವಣಿಗೆಯ ನಿರ್ವಹಣೆ ಮತ್ತು ವಿಭಿನ್ನ ಓದುಗ ಸಮೂಹಗಳ ಅಭಿರುಚಿಯನ್ನು ಅರ್ಥಮಾಡಿಕೊಳ್ಳುವ ಅವರ ವೃತ್ತಿಪರ ಪಯಣದ ಪ್ರಮುಖ ಭಾಗವಾಗಿದೆ.
ಪತ್ರಿಕೋದ್ಯಮದಾಚೆಗೂ ಸೃಜನಶೀಲ ಸಾಹಿತ್ಯದಲ್ಲಿ ಸಕ್ರಿಯರಾಗಿರುವ ಗಿರೀಶ್ ತಾಳಿಕಟ್ಟೆ ಅವರು, ತಮ್ಮ ಸಾಹಿತ್ಯ ಕೃತಿಗಳ ಮೂಲಕವೂ ಓದುಗರೊಂದಿಗೆ ಸಂವಾದ ನಡೆಸಿದ್ದಾರೆ. ‘ಜೆನ್ ಕತೆಗಳು’, ‘ಎಲ್ಲೆ ತೊರೆದ ಕತೆಗಳು’, ‘ಟರ್ನಿಂಗ್ ಪಾಯಿಂಟ್’, ‘ಆ 117 ದಿನಗಳು’ ಮತ್ತು ‘ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಈ ಸಾಹಿತ್ಯಿಕ ಪಯಣವು ಪತ್ರಿಕೋದ್ಯಮದ ವೃತ್ತಿಪರ ಅನುಭವದೊಂದಿಗೆ ಸೃಜನಶೀಲ ಬರವಣಿಗೆಯ ಆಸಕ್ತಿಯೂ ಬೆಸೆದುಕೊಂಡಿರುವುದನ್ನು ಪರಿಚಯಿಸುತ್ತದೆ.
ಸಂಪಾದಕೀಯ ಸಲಹೆಗಾರರು

ಟಿ ಎನ್ ಷಣ್ಮುಖ
ಹಿರಿಯ ಪತ್ರಕರ್ತರು ಮತ್ತು ಕಾದಂಬರಿಕಾರರು. ಲಂಕೇಶ್ ಪತ್ರಿಕೆಯಲ್ಲಿ ಗುರುತಿಸಿಕೊಂಡ ಅವರು ನಂತರ ದಾವಣಗೆರೆಯಿಂದ ತಮ್ಮದೇ ಸಂಪಾದಕತ್ವದಲ್ಲಿ ಪ್ರಜಾಕೂಗು ಎಂಬ ಸ್ವತಂತ್ರ ಪತ್ರಿಕೆಯನ್ನು ಹೊರತರುತ್ತಿದ್ದರು. ದಂಗೆಯೆದ್ದವರು, ಗರ್ಭಗುಡಿ, ಮುಖ ಮತ್ತು ಮುಖವಾಡಗಳು, ಮೌನದ ಸನ್ನಿಧಿಯಲ್ಲಿ, ಮತ್ತೊಂದು ನೋಟೀಸು, ಪ್ರತಿಕ್ರಿಯೆ ಇವರ ಪ್ರಮುಖ ಕೃತಿಗಳು.

ಬಿ ಚಂದ್ರೇಗೌಡ
ಹಿರಿಯ ಕನ್ನಡ ಸಾಹಿತಿ, ಪತ್ರಕರ್ತ. ಹೆಸರಾಂತ ಲಂಕೇಶ್ ಪತ್ರಿಕೆಯಲ್ಲಿ ಗ್ರಾಮೀಣ ಸೊಗಡಿನ ‘ಕಟ್ಟೆಪುರಾಣ’ ಅಂಕಣದ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದರು. ಹೊಸ ಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ (ಕಾದಂಬರಿ), ಹಳ್ಳಿಕಾರನ ಅವಸನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟಕೋಳಿ, ಕಾಳಮಾವನ ಕಡೇದಿನಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಸತೀಶ್ ಎಸ್
‘ಲಂಕೇಶ್ ಪತ್ರಿಕೆ’, ‘ಗೌರಿ ಲಂಕೇಶ್’, ‘ಗೈಡ್’ ಮಾಸಪತ್ರಿಕೆ ಸೇರಿದಂತೆ ಎರಡು ದಶಕಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ತಮ್ಮದೇ ಮಾಧ್ಯಮ ಸಂಪರ್ಕ ಸಂಸ್ಥೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.
